ಜನತಾ ಕರ್ಫ್ಯೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೋನಾವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಮಾಡಿದ ಪ್ರಯತ್ನ. ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ 'ಕರ್ಫ್ಯೂ' ಆಚರಿಸುವಂತೆ ಪ್ರಧಾನ ಮಂತ್ರಿ ಭಾರತದ ಎಲ್ಲಾ ನಾಗರಿಕರನ್ನು ಕೋರಿದರು. ಮಾರ್ಚ್ ೨೪ ರಂದು ಮುಂದಿನ ೨೧ ದಿನಗಳವರೆಗೆ ಭಾರತವು 'ಒಟ್ಟು ಲಾಕ್-ಡೌನ್'ನಲ್ಲಿ ಇರುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ. == ಕಾರ್ಯ ತಂತ್ರ == ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು. ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ ಅಗತ್ಯ ಸೇವೆಗಳನ್ನು ನೀಡುವ ಜನರನ್ನು ಹೊರತುಪಡಿಸಿ ಎಲ್ಲರೂ ಕರ್ಫ್ಯೂನಲ್ಲಿ ಭಾಗವಹಿಸಬೇಕಾಗಿತ್ತು. ಸಂಜೆ ೫ ಗಂಟೆಗೆ (೨೨ ಮಾರ್ಚ್ ೨೦೨೦), ಎಲ್ಲಾ ನಾಗರಿಕರು ತಮ್ಮ ದ್ವಾರಗಳಲ್ಲಿ, ಬಾಲ್ಕನಿಗಳಲ್ಲಿ ಅಥವಾ ಕಿಟಕಿಗಳಲ್ಲಿ ನಿಂತು, ಈ ಅಗತ್ಯ ಸೇವೆಗಳನ್ನು ನೀಡುವ ಜನರಿಗೆ ಮೆಚ್ಚುಗೆಯಾಗಿ ಕೈ ಚಪ್ಪಾಳೆ ತಟ್ಟಲು ಅಥವಾ ಗಂಟೆ ಬಾರಿಸುವಂತೆ ಕೇಳಲಾಯಿತು. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿದ ಜನರು ದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಬೇಕಾಗಿತ್ತು. == ಇತರ ಸಂಸ್ಥೆಗಳು ಅಥವಾ ಸಂಘಗಳ ಬೆಂಬಲ == ದೆಹಲಿಯ ಕೆಲವು ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಜನತಾ ಕರ್ಫ್ಯೂ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಹೇಳಿದ್ದಾರೆ. == ಕರ್ಫ್ಯೂ ಸಮಯದಲ್ಲಿ ರಾಜ್ಯಗಳು ಕೈಗೊಂಡ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳು == ಕೆಲವು ರಾಜ್ಯಗಳು ಮೆಟ್ರೋ ರೈಲುಗಳು, ಉಪನಗರ ರೈಲುಗಳು, ಬಸ್ಸುಗಳು, ಟ್ರಾಮ್‌ಗಳು ಮತ್ತು ಮೊನೊರೈಲ್ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ. ಜನತಾ ಕರ್ಫ್ಯೂ ಸಮಯದಲ್ಲಿ ಜೈಲುಗಳಿಗೆ ಭೇಟಿ ನೀಡಲು ಮತ್ತು ಮೀನುಗಾರಿಕೆಗೆ ಅವಕಾಶವಿಲ್ಲ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಅಲ್ಲಿನ ಜನರಿಗೆ ಭಾನುವಾರ (೨೨-೦೩-೨೦೨೦) ಬೆಳಿಗ್ಗೆ ೬ ಗಂಟೆಯಿಂದ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕೆಂದು ಮನವಿ ಮಾಡಿದರು. == ಉಲ್ಲೇಖಗಳು ==